ಪುಸ್ತಕ: ಕವಲು ಲೇಖಕರು: ಎಸ್ ಎಲ್ ಬೈರಪ್ಪ ವಿಮರ್ಶೆ: ಕಾಶಿನಾಥ ಶಿರಿಗೇರಿ "ಪಾಶ್ಚಿಮಾತ್ಯ ದೇಶಿಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾದ ಎರಡು ಕವಲುಗಳಲ್ಲಿ ಸ್ವದೇಶೀಯ ಸಂಸ್ಕೃತಿ ಪ್ರೀತಿಸುವ ಎರಡು ಕವಲುಗಳು ಒಡಿತ್ತಾವ ಎಷ್ಟಾದರೂ ಸ್ವದೇಶಿ ಬೇರುಗಳಲ್ಲವೇ"........ ಓದಿ ಖಂಡಿತ ನಮ್ಮ ಸಂಬಂಧಗಳನ್ನು ಪ್ರೀತಿಸುವಂತೆ ಮಾಡತ್ತೆ.ಮನುಷ್ಯ ಸಂಬಂಧಗಳು ಹಿಡಿದಿರುವ ಕವಲು ದಾರಿ , ಆಧುನಿಕತೆಯ ,ಅತೀ ಸಮಾನತೆಯ ಹಂಬಲದಿಂದ , ಹೆಣ್ಣಿಗೆ ಹುಟ್ಟಿನಿಂದ ಬಂದ ಹಾಳು ಅನುಮಾನದ ಗುಣದಿಂದ , ಹೆಣ್ಣು ಮಕ್ಕಳ ಆತುರದ ನಿರ್ಧಾರದಿಂದ ಸಂಬಂಧಗಳ ಮದ್ಯ ಉಂಟಾಗುವ ಪರಿಣಾಮವನ್ನು ಬಹಳ ಅದ್ಭುತವಾಗಿ ಬಿಡಿಸಿಟ್ಟಿದ್ದಾರೆ ಭೈರಪ್ಪನವರು. ಎಸ್.ಎಲ್. ಬೈರಪ್ಪನವರ ಎಲ್ಲ ಅತ್ಯತ್ತಮ ಕಾದಂಬರಿಗಳಲ್ಲಿ ಕವಲು ಕೂಡ ಒಂದು. ಈಗಿನ ವಿದ್ಯಮಾನಗಳನ್ನು ಕಾದಂಬರಿಯಲ್ಲಿ ಬಹಳ ಸೊಗಸಾಗಿ ಚಿತ್ರಿಸಲಾಗಿದೆ. ಪ್ರಕಟವಾದ ಎರಡು ತಿಂಗಳುಗಳಲ್ಲೇ ಐದು ಮರುಮುದ್ರಣಗಳನ್ನು ಕಂಡಿರುವ ಎಸ್.ಎಲ್.ಭೈರಪ್ಪನರ ಕವಲು ಒಂದು ಅತ್ಯುತ್ತಮ ಕಾದಂಬರಿ. ಇದು ಸಮಕಾಲೀನ ವಿಷಯಗಳಾದ ಸ್ತ್ರೀ ಸ್ವಾತಂತ್ರ್ಯ, ವಿವಾಹ ವಿಚ್ಚೇದನ, ಮಹಿಳಾ ಸಬಲೀಕರಣ, ಲೈಂಗಿಕ ಸ್ವಚ್ಛಂದತೆ, ಅಂತರ್ಲಿಂಗೀಯ ಶೋಷಣೆ, ಕಾನೂನು ವಿಶ್ಲೇಷಿಸುವ ವಿಶಿಷ್ಟ ಕೃತಿ. ಕುತೂಹಲಕಾರಿಯಾಗಿ ಓದಿಸಿಕೊಂಡು ಹೋಗುವ ಕಥನ ತಂತ್ರದಲ್ಲಿಯೇ ನೇರಜೀವನದ ಅನಂತ ವೈವಿದ್ಯಮಯ ಅನುಭವಗಳ ಸೂಕ್ಷ್ಮಾತಿ ಸೂಕ್ಷಮ ವಿವರಗಳನ್ನು ಹೃದಯಸ್ವರ್ಶಿಯ...