ನಾನು ಓದಿದ ಒಂದು ಪುಸ್ತಕ- ರಂಗಣ್ಣನ ಕನಸಿನ ದಿನಗಳು.
ಲೇಖಕ : ಎಂ. ಆರ್. ಶ್ರೀನಿವಾಸಮೂರ್ತಿ
ವಿಮರ್ಶೆ: ಕಾಶಿನಾಥ ಶಿರಿಗೇರಿ
ಇಂದು ನಾನು ಓದಿದ ಪುಸ್ತಕದ ಹೆಸರು 'ರಂಗಣ್ಣನನ ಕನಸಿನ ದಿನಗಳು' .ಈ ಪುಸ್ತಕವನ್ನು ಪ್ರತಿಯೊಬ್ಬ ಶಿಕ್ಷಕರು ಓದಲೆ ಬೇಕಾದ ಪುಸ್ತಕ. ಈ ಪುಸ್ತಕದಲ್ಲಿ ೧೯೩೦&೪೦ ದಶಕದ ಮಧ್ಯಭಾಗದಲ್ಲಿ ಆಗಿನ ಮೈಸೂರು ಸಂಸ್ಥಾನದ ಅಧೀನದಲ್ಲಿ ಆಳ್ವಿಕೆ ಸಂದರ್ಭದಲ್ಲಿ ನಮ್ಮ ನಾಡಿನ ಕನ್ನಡ ಶಾಲೆಯ ಮತ್ತು ಶಿಕ್ಷಕರ ಪರಿಸ್ಥಿತಿಯನ್ನು ಸುಧಾರಿಸಲು ರಂಗಣ್ಣನವರ ಎಂಬ ಕನ್ನಡ ಶಾಲೆ ಶಿಕ್ಷಕನಾಗಿ ಮುಂದೆ ಶಾಲಾ ಇನ್ಸಪೇಕ್ಟರ ಮಾಡುವ ಸೇವೆ ನಮ್ಮನೆಲ್ಲಾ ಅಚ್ಚರಿ ಮೂಡಿಸುತ್ತದೆ. ರಂಗಣ್ಣನವರ ಮಾಡುವ ಶಾಲಾ ಇನ್ಸಪೇಕ್ಟರ್ ಆಗಿ ಕಾರ್ಯ ನಿರ್ವಹಿಸಿದ ಪಾತ್ರ ,ಅವರಿಗಿಂದ ಶಾಲೆ ಮತ್ತು ಶಿಕ್ಷಕರ ಬಗ್ಗೆ ಕಾಳಜಿ ,ಮಕ್ಕಳಿಗೆ ಯಾವ ರೀತಿಯ ಶಿಕ್ಷಣ ನೀಡಬೇಕು ಎಂದು ಶಿಕ್ಷಕರಿಗೆ ನೀಡುವ ಮಾರ್ಗದರ್ಶನ ,ಶಾಲಾ ಸುಧಾರಣೆಗಾಗಿ ಗ್ರಾಮದ ಜನರ ವಿಶ್ವಾಸ ಗಳಿಸುವ ಕ್ರಮಗಳು, ಇನ್ನೂ ಅನೇಕ ರೀತಿಯ ಸಂದರ್ಭದಲ್ಲಿ ಅವರು ಮಾಡಿದ ಸೇವೆ ಶ್ಲಾಘನೀಯ. ಆಗಿನ ಕಾಲದಲ್ಲೊ ಪುಡಾರಿ ಶಿಕ್ಷಕರನ್ನು ಮತ್ತು ಒತ್ತಡ ತರುವ ರಾಜಕೀಯ ನಾಯಕರನ್ನು ನಿಭಾಯಿಸುವ ಸಾಮರ್ಥ್ಯ ಮೆಚ್ಚುವಂತದ್ದು.ಇನ್ನೂ ಅನೇಕ ಸಂದರ್ಭಗಳು ಈಗಿನ ವಾಸ್ತವಿಕ ಶಿಕ್ಷಣ ವ್ಯವಸ್ಥೆ ಜಗತ್ತಿನಲ್ಲಿ ಅತ್ಯಂತ ಹತ್ತಿರದ ವಿಷಯಗಳೊಂದಿಗೆ ಹೊಂದಾಣಿಕೆ ಆಗುತ್ತವೆ. ಓದಿತ್ತಾ ಹೋದಂತೆ ಈಗ ನಾವು ಮಾಡುವ ಕೆಲಸಗಳೊಂದಿಗೆ ತಾಳೆಯನ್ನು ಮನಸ್ಸುನಲ್ಲೆ ಮಾಡುತ್ತವೆ.ರಂಗಣ್ಣನವರ ಶಾಲಾ ಇನ್ಸಪೇಕ್ಟರಾಗಿ ತನ್ನ ರೆಂಜನಲ್ಲಿ ಬರುವ ಶಾಲೆಯ ತಪಸಣಾ ಸಂದರ್ಭದಲ್ಲಿ ಶಿಕ್ಷಕರೊಂದಿಗೆ ನಡೆದುಕೊಳ್ಳುವ ರೀತಿ, ನೀಡುವ ಸಲಹೆ ಮೇಚ್ಚುವಂತದ್ದು. ಅಲ್ಲದೆ ತನ್ನ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಗಳಿಗೆ ಸೈಕಲ್ ಮೇಲೆ ತೆರಳಿ ಬೇಟಿಮಾಡೊ ಸಂದರ್ಭಗಳು ತುಂಬಾ ಸೊಗಸಾಗಿ ವಿವರಿಸಿದ್ದಾರೆ.ಒಂದು ದೇಶದ ಭವಿಷ್ಯ ಅವಲಿಂಬಿತವಾಗಿರುವುದು ಆ ದೇಶ ತನ್ನಲ್ಲಿರುವ ವಿದ್ಯಾರ್ಥಿಗಳಿಗೆ ನೀಡುವ ಶಿಕ್ಷಣದ ಮೇಲೆ. ಶಿಕ್ಷಣ ಕ್ಷೇತ್ರದಲ್ಲಿರುವ ಆಮೂಲಾಗ್ರತೆ, ನಾವೀನ್ಯತೆ, ಪ್ರಧಾನ್ಯತೆಗೆ ಎಷ್ಟು ಒತ್ತು ಕೊಡುವುದೋ ಅಷ್ಟು ಅಭಿವೃದ್ಧಿಗೆ ಪೂರಕ ಬುನಾದಿ ಆ ದೇಶದಲ್ಲಿ ಬೀಳುತ್ತದೆ. ವಿದ್ಯಾರ್ಥಿಗಳೇ ಅಲ್ಲವೇ ಮುಂದಿನ ದಿನಗಳಲ್ಲಿ ದೇಶವನ್ನು ಮುನ್ನಡೆಸುವ ಹೊಣೆ ಹೊತ್ತವರು? ಸಭ್ಯ ಸಮಾಜಕ್ಕೆ ಸಭ್ಯ ವಿದ್ಯಾರ್ಥಿಗಳ ಕೊಡುಗೆ ಅಪಾರ. ವಿದ್ಯಾರ್ಥಿಗಳೇನೋ ದೇಶದ ಆಸ್ತಿ, ಭವಿಷ್ಯದ ನೇತಾರರು, ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವರೇನೋ ಸರಿ. ಆದರೆ ಆ ಮಾದರಿ ವಿದ್ಯಾರ್ಥಿಗಳನ್ನು ಸಮಾಜಕ್ಕೆ ತಯಾರು ಮಾಡಿ ಕೊಡುವರು ಯಾರು? ಶಿಕ್ಷಕರೇ ಅಲ್ಲವೇ!?
ಇಡೀ ಶಿಕ್ಷಣ ವ್ಯವಸ್ಥೆ ನಿಂತಿರುವುದೇ, ದೇಶದ ಪ್ರಗತಿ ಆಧಾರಪಟ್ಟಿರುವುದೇ ಶಿಕ್ಷಕರ ಮೇಲೆ. ಈಗ ಬಿಡಿ, ಖಾಸಗಿ ಶಾಲೆಗಳೂ ನಾಯಿಕೊಡೆಯಂತೆ ಬೆಳೆದು ನಿಂತಿರುವುದರಿಂದ, ಶಿಕ್ಷಣವೂ ವಾಣಿಜ್ಯಕರಣಗೊಂಡಿರುವುದರಿಂದ, ಯಾವ ಉದ್ದಿಮೆಗಳಿಗೂ ಕಡಿಮೆಯಿಲ್ಲದೆ ವ್ಯಾಪಾರ ಕೇಂದ್ರಗಳಾಗಿ ಮಾರ್ಪಾಟಾಗಿರುವುದರಿಂದ ಈಗಿನ ಶಿಕ್ಷಕರು - ಆಗಿನ ಶಿಕ್ಷಕರಂತೆ ಕಷ್ಟವೇನೂ ಪಡಬೇಕಾಗಿಲ್ಲ. ಅವರವರ ಯೋಗ್ಯತೆಗೆ ತಕ್ಕಂತೆ ಸಂಬಳ, ಭತ್ಯೆಗಳನ್ನು ಪಡೆಯುತ್ತಿದ್ದಾರೆ. ಹಾಗೆ ನೋಡಿದರೆ ಇಂದಿನ ಶಿಕ್ಷಕರ ಕಷ್ಟನಷ್ಟಗಳೇನೇ ಇರಲಿ, ಕುಂದು ಕೊರತೆಗಳೇನೇ ಇರಲಿ, ಎಲ್ಲದಕ್ಕೂ ಒಂದು ಪರಿಮಿತಿಯಿದೆ. ತಮಗಿರುವ ಕಷ್ಟಕಾರ್ಪಣ್ಯಗಳಿಗೆ - ಸರಿಯಾಗಿ ಯೋಚಿಸಿ ನಡೆದರೆ - ಅದರಿಂದ ಹೊರಬರಲು ತಕ್ಕುದಾದ ಅನ್ಯ ಮಾರ್ಗಗಳಿವೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ